ಛತ್ರಿಮರ
ಏರಾಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಒಂದೇ ಒಂದು ಉದ್ದನೆಯ ಕಾವಿನ ತುದಿಯಲ್ಲಿ 8-15 ಎಲೆಗಳು ಸುತ್ತಲೂ ಹರಡುವುದರಿಂದ ಇಡೀ ಗುಂಪು ಕೊಡೆಯಂತೆ ಕಾಣುತ್ತದೆ. ಇದರಿಂದಲೇ ಬಹುಶಃ ಇದಕ್ಕೆ ಛತ್ರಿಮರ ಎಂದು ಹೆಸರು ಬಂದಿರಬೇಕು. ಇದರ ಶಾಸ್ತ್ರಿಯ ಹೆಸರು ಶೆಫ್ಲೆರ ಆಕ್ಟಿನೋಫಿಲ. ಇದು ಸುಮಾರು 30' ಎತ್ತರಕ್ಕೆ ಬೆಳೆಯುವ ನಿತ್ಯಹಸಿರಿನ ಮರ. ಹೂಗಳು ಕೆಂಪು ಬಣ್ಣದವು. ಕಾಯಿಗಳು ಕಪ್ಪು, ಛತ್ರಿಮರವನ್ನು ಬೀಜಗಳಿಂದ ಇಲ್ಲವೆ ಕಾಂಡತುಂಡಗಳಿಂದ ಬೆಳೆಸಬಹುದು.										(ಎಂ.ಎಚ್.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ